ಸೇವೆಗಳು

ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರವು ವಿವಿಧ ಇಲಾಖೆಗಳು, ಜಿಲ್ಲಾ ಪಂಚಾಯತ್‍ಗಳು, ಇತರ ಸರ್ಕಾರಿ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು, ಸರ್ಕಾರೇತರ ಸಂಸ್ಥೆಗಳು, ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯದ ಸಂಸ್ಥೆಗಳಿಗೆ ಅತ್ಯಲ್ಪ ವೆಚ್ಚದಲ್ಲಿ ಗ್ರಾಹಕೀಕರಣಗೊಳಿಸಿದ ಯೋಜನೆಗಳ ಮೂಲಕ ಕಚ್ಚಾ ಮಾಹಿತಿ / ಪರಿಷ್ಕರಿಸಿದ ಉತ್ಪನ್ನಗಳ ಉಪಗ್ರಹ ದತ್ತಾಂಶ ನಕ್ಷೆಗಳು, ವಿಷಯಾಧಾರಿತ ನಕ್ಷೆಗಳು, ಕ್ರಿಯಾ ಯೋಜನೆಗಳು, ಗುಣಲಕ್ಷಣ ದತ್ತಾಂಶಗಳು ಮತ್ತು ಜಿಯೋ ಡೇಟಾಬೇಸ್‍ಗಳನ್ನು ಒದಗಿಸುತ್ತಿದೆ. ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರವು ಅಭಿವೃದ್ದಿಪಡಿಸಿರುವ ಭೌದೇಶಿಕ ದತ್ತಾಂಶ ಸಂಚಯವು ಸಂಬಂಧಿತ ಇಲಾಖೆಗಳಲ್ಲಿ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗೆ ಅನಿವಾರ್ಯ ಸಾಧನವಾಗಿದೆ.

ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರವು ಗ್ರಾಹಕರ ಅವಶ್ಯಕತೆ ತಕ್ಕಂತೆ ಗ್ರಾಹಕೀಯಗೊಳಿಸಿದ ಯೋಜನೆಗಳನ್ನು ಕೈಗೊಳ್ಳಲು ಸಂಬಂಧಿತ ಇಲಾಖೆಗಳೊಂದಿಗೆ ಒಟ್ಟುಗೂಡಿ ಕಾರ್ಯನಿರ್ವಹಿಸುತ್ತದೆ. ಈ ಕೇಂದ್ರದ ಅಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸಾರ್ವಜನಿಕ / ಖಾಸಗಿ ವಲಯ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು (ಓಉಔ’s), ರೈತರು ಅಥವಾ ಕರ್ನಾಟಕದ / ಭಾರತದ ಯಾವುದೇ ಸಹನಾಗರೀಕರಿಗೆ ಮತ್ತು ಸಂಬಂಧಿತ ರಾಜ್ಯ ಸರ್ಕಾರಿ ಇಲಾಖೆಗಳಿಗೆ ಈ ಕೆಳಗಿನ ಸೇವೆಗಳನ್ನು ಒದಗಿಸುತ್ತಿದೆ.

 • ಎನ್‍ಅರ್‍ಎಸ್‍ಸಿ, ಹೈದ್ರಾಬಾದ್ ಮೂಲಕ ಬಳಕೆದಾರರ ಬೇಡಿಕೆಗನುಗುಣವಾಗಿ ವಿವಿಧ ಯೋಜನೆಗಳಲ್ಲಿ ಬಳಸುವುದಕ್ಕಾಗಿ ದೇಶೀಯ ಮತ್ತು ವಿದೇಶ ಮೂಲದ ಆಪ್ಟಿಕಲ್ ಮತ್ತು ಮೈಕ್ರೋವೇವ್ ತರಂಗಗಳ ಉಪಗ್ರಹ ಚಿತ್ರಗಳು, ವೈಮಾನಿಕ ಫೋಟೋಗಳು ಮತ್ತು ಐIಆಂಖ ದತ್ತಾಂಶದ ಉಪಗ್ರಹ ಚಿತ್ರಗಳ ಆಯ್ಕೆ, ಸಂಗ್ರಹಣೆ ಮತ್ತು ಪೂರೈಕೆ.
 • ಡಿಜಿಪಿಎಸ್ ಸಮೀಕ್ಷೆ ಮತ್ತು ಕೇಂದ್ರ / ಸ್ಥಳದ ಒಟ್ಟು ಸಮೀಕ್ಷೆಯನ್ನು ಭೂ ಉಲ್ಲೇಖಿತಗೊಳಿಸಲು ಸ್ಥಳ ನಕ್ಷೀಕರಣ, ಗಡಿಶೋಧನೆ ಮತ್ತು ರೂಪ ವೈಶಿಷ್ಟ್ಯ ನಿರೂಪಣೆಗೆ ಬಳಸಲಾಗುತ್ತಿದೆ.
 • ಸ್ಕ್ಯಾನಿಂಗ್, ಡಿಜಿಟೈಸೇಷನ್, ಡಿಜಿಟಲ್ ಕಾರ್ಟೋಗ್ರಫಿ, ಮೌಲ್ಯವರ್ಧನೆ ಮತ್ತು ನಕ್ಷೆಗಳ ಮುದ್ರಣ.
 • ಉಪಗ್ರಹ ಚಿತ್ರಗಳ / ವೈಮಾನಿಕ ಚಿತ್ರಗಳ ಡಿಜಿಟಲ್ ಪರಿಷ್ಕರಣೆ, ಆಇಒ, ಆSಒ ಗಳ ಆರ್ಥೋರೆಕ್ಟಿಫಿಕೇಶನ್.
 • ಉಪಗ್ರಹ ಚಿತ್ರಗಳ ನಿರೂಪಣೆ ಒಂದು ಮಿಲಿಯನ್ ನಿಂದ 500 ಅಳತೆಯಲ್ಲಿ ಮೂಲ ನಕ್ಷೆ ಸಿದ್ದಪಡಿಸುವಿಕೆ, ಬಳಕೆ ನಕ್ಷೆಗಳು, ನೀರು ಹರಿವಿನ, ಅಂತರ್ಜಲ, ಇಳಿಜಾರು ಮತ್ತು ಆಕಾರ ನಕ್ಷೆಗಳು, ಭೂ ಬಳಕೆ / ಭೂ ಹೊದಿಕೆ ನಕ್ಷೆಗಳು, ಮಣ್ಣಿನ ನಕ್ಷೆಗಳು, ಭೌಗೋಳಿಕ ರಚನೆಗಳ ನಕ್ಷೆಗಳು, ಶಿಲಾಶಾಸ್ತ್ರ ನಕ್ಷೆಗಳು, ಭೂರೂಪಶಾಸ್ತ್ರ ನಕ್ಷೆಗಳು ಮತ್ತು ಇತರ ನಕ್ಷೆಗಳು ಮುಂತಾದವುಗಳನ್ನು ಸಿದ್ದಪಡಿಸುವುದು.
 • ನೈಸರ್ಗಿಕ ಸಂಪನ್ಮೂಲಗಳ ತಪಾಸಣೆ, ಹಂಚಿಕೆ ನಕ್ಷೆಗಳು, ಅವುಗಳ ದಟ್ಟಣಿ ನಕ್ಷೆಗಳನ್ನು ಸಿದ್ದಪಡಿಸಲಾಗಿದೆ.
 • ದೂರ ಸಂವೇದನೆ, ಜಿಐಎಸ್, ಜಿಪಿಎಸ್ ಬಳಸಿ ಕ್ರಿಯಾ ಯೋಜನೆಗೆ ಅನುಕೂಲವಾಗುವ ನಿರೂಪಣಾ ನಕ್ಷೆಗಳನ್ನು ಸಿದ್ದಪಡಿಸಲಾಗಿದೆ.
 • ಬಹು ಮಾನದಂಡ ಬಳಸಿ ವಿಶ್ಲೇಷಣೆ, ಪ್ರಭಾವ ಮೌಲ್ಯಮಾಪನೆ, ಬದಲಾವಣೆ ಪತ್ತೆ, ಪ್ರಾದೇಶಿಕ ಮತ್ತು ಬಹುಕಾಲಿಕ ವಿಶ್ಲೇಷಣೆ ಮುಂತಾದವನ್ನು ನಡೆಸಲಾಗುತ್ತಿದೆ.
 • ಜಿಐಎಸ್ ಜಾಲ ಮತ್ತು ಸಾಮಿಪ್ಯ ವಿಶ್ಲೇಷಣೆಯನ್ನು ಬಳಸಿ ಬೌದೇಶಿಕ ದತ್ತಾಂಶಗಳ ವಿಶ್ಲೇಷಣೆ ಮಾಡಲಾಗುತ್ತಿದೆ. 
 • ಭೂ ಸಂಪನ್ಮೂಲ ಅಭಿವೃದ್ಧಿ ಮಾಹಿತಿ ವ್ಯವಸ್ಥೆ, ನಿರ್ಧಾರ ಬೆಂಬಲ ವ್ಯವಸ್ಥೆ ಮುಂತಾದವುಗಳನ್ನು ಕೇಂದ್ರದಿಂದ ಕೈಗೊಳ್ಳಲಾಗುತ್ತಿದೆ.
 • ಯೋಜನಾ ಪ್ರಸ್ತಾವನೆಗಳನ್ನು ಸಿದ್ದಪಡಿಸುವಿಕೆ, ವಿವರವಾದ ಯೋಜನಾ ವರದಿಗಳು, ದೂರ ಸಂವೇದನೆ ಮತ್ತು ಜಿಐಎಸ್ ಯೋಜನೆಗಳ ವೆಚ್ಚ ಮತ್ತು ಸಮಯದ ಅಂದಾಜುಗಳ ನಿರ್ಣಯ ಮುಂತಾದುವನ್ನು ಕೈಗೊಳ್ಳಲಾಗುತ್ತದೆ.
 • ಬಳಕೆದಾರರ ಅಗತ್ಯತೆಗಳ ಆಧಾರದ ಮೇಲೆ ತರಬೇತಿ, ಸಾಮಥ್ರ್ಯ ನಿರ್ಮಾಣ ಮತ್ತು ಸಮಾಲೋಚನೆ ನಡೆಸಲಾಗುತ್ತದೆ.
 • ಅರಿವು ಮೂಡಿಸುವ ಕಾರ್ಯಕ್ರಮಗಳು, ಜನ ಸಾಮಾನ್ಯರಿಗೆ ಮತ್ತು ವಿಶ್ವವಿದ್ಯಾಲಯದ ಸಿಬ್ಬಂದಿಗೆ ಪುನಶ್ಚೇತಕ ಪಠ್ಯಕ್ರಮಗಳನ್ನು ಬೇಡಿಕೆ ಆಧಾರದ ಮೇಲೆ ಕೈಗೊಳ್ಳಲಾಗುವುದು.