ನಿರ್ದೇಶಕರು

director image

ಡಾ. ಡಿ. ಕೆ. ಪ್ರಭುರಾಜ್

ವಿದ್ಯಾರ್ಹತೆ: ಎಂ.ಎಸ್‍ಸಿ, ಪಿ.ಹೆಚ್‍ಡಿ (ಕೃಷಿ)

ಅನುಭವ: ವಿಜ್ಞಾನಿಯಾಗಿ 25 ವರ್ಷಗಳ ಸೇವೆ

ಮಿಂಚಂಚೆ ವಿಳಾಸ: prabhuraj_1464@yahoo.com

ಸಂಶೋಧನಾ ಆಸಕ್ತಿ: ಮಣ್ಣು ವಿಜ್ಞಾನ (ಕೃಷಿ), ದೂರ ಸಂವೇದಿ ತಂತ್ರಜ್ಞಾನ, ಭೌಗೋಳಿಕ ಮಾಹಿತಿ ವ್ಯವಸ್ಥೆ ಮುಂತಾದವು

ಡಾ. ಡಿ. ಕೆ. ಪ್ರಭುರಾಜ್ ಇವರು ಕೃಷಿ ವಿಜ್ಞಾನ (ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ಶಾಸ್ತ್ರ) ದಲ್ಲಿ ಪಧವೀಧರರಾಗಿದ್ದು, 25 ವರ್ಷಗಳ ಸುದೀರ್ಘ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಅನುಭವ ಹೊಂದಿರುತ್ತಾರೆ. 1992 ರಲ್ಲಿ ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ ವಿಭಾಗ, ಕೃಷಿ ವಿಶ್ವ ವಿದ್ಯಾಲಯ, ಬೆಂಗಳೂರು ಇಲ್ಲಿ ಸಂಶೋಧನಾ ಸಹಾಯಕವಾಗಿ ಸೇವೆ ಪ್ರಾರಂಭಿಸಿ ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಮಣ್ಣು ವಿಜ್ಞಾನ ಶಾಖೆಯಲ್ಲಿ ವಿಜ್ಞಾನಿ ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ತದನಂತರ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದಲ್ಲಿ ವಿಜ್ಞಾನಿ-ಇ ಆಗಿ 2004 ರಿಂದ 2010 ರವರೆಗೆ ಸೇವೆ ಸಲ್ಲಿಸಿ ಪ್ರಸ್ತುತ ಇದೇ ಕೇಂದ್ರದಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರೊಂದಿಗೆ, ಈ ಕೇಂದ್ರವು ನಡೆಸುತ್ತಿರುವ ಗಿಖಿU-ಇಅ ಅಂಗ ಸಂಸ್ಥೆಯಾಗಿ ಎಂ.ಟೆಕ್ ಸ್ನಾತಕೋತ್ತರ ಪದವಿ ಕೋರ್ಸ್‍ನ ಪ್ರಾಂಶುಪಾಲರಾಗಿಯು ಕಾರ್ಯನಿರ್ವಹಿಸುತ್ತಿದ್ದಾರೆ.