ಪ್ರಾಂತೀಯ ಕಛೇರಿಗಳು

ಕಲಬುರ್ಗಿ

ಕಲಬುರ್ಗಿ ಪ್ರಾದೇಶಿಕ ಕೇಂದ್ರವು 2005 ರಲ್ಲಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಲಿಯವರಿಂದ ನಿರ್ಮಿಸಲ್ಪಟ್ಟ ಕಟ್ಟಡದಲ್ಲಿ ಕ್ರಿಯಾ ಶೀಲವಾಗಿದೆ. ಯೋಜನಾ ವಿಜ್ಞಾನಿಯೊಬ್ಬರ ಮುಖಂಡತ್ವದಲ್ಲಿ 20 ಮಂದಿ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿರುತ್ತಾರೆ. ಭೂ ದಾಖಲೆಗಳ ದತ್ತಾಂಶ ಸೃಜನೆ, ಪಹಣಿ ಆಧಾರಿತ ದತ್ತಾಂಶ ಮಾಹಿತಿ ಸೃಜನೆ, ಭೂರೂಪಶಾಸ್ತ್ರ ಮತ್ತು ರೇಖಾಕೃತಿ ನಕ್ಷೀಕರಣ ಇವನ್ನು ಹೈದರಾಬಾದ್ ಕರ್ನಾಟಕ ಪ್ರದೇಶದಡಿ ಬರುವ ಏಳು ಜಿಲ್ಲೆಗಳಿಗೆ ಒದಗಿಸುತ್ತಿದೆ. ಈ ಕೇಂದ್ರವು ಸುಸಜ್ಜಿತವಾಗಿದ್ದು ಈ ಪ್ರಾಂತ್ಯದ ಯೋಜನೆ ಮತ್ತು ನಿರ್ವಹಣೆಗೆ ಆಯುಕ್ತರಿಗೆ ಅಗತ್ಯವಿರುವ ಭೌದೀಶಿಕ ಮಾಹಿತಿಯನ್ನು ಒದಗಿಸುತ್ತಿದೆ.

ಬಾಗಲಕೋಟೆ

ಸರ್ಕಾರಿ ಆದೇಶ ಸಂಖ್ಯೆ ಐಟಿಡಿ 209 ಎಡಿಎಂ 2014 ದಿನಾಂಕ: 09-01-2015 ರನ್ವಯ ಈ ಪ್ರಾದೇಶಿಕ ಕೇಂದ್ರವನ್ನು ಬಾಗಲಕೋಟೆಯಲ್ಲಿ ಸ್ಥಾಪಿಸಲಾಯಿತು ಹಾಗೂ ಮಾನ್ಯ ಸಚಿವರು-ಯೋಜನೆ, ಅಂಕಿ ಅಂಶ ಮತ್ತು ಮಾತಂ, ಜೈತಂ ಹಾಗೂ ವಿ& ತಂ ಇಲಾಖೆ ಇವರಿಂದ ಉದ್ಘಾಟಿಸಲ್ಪಟ್ಟಿತು. ಇಲ್ಲಿ 06 ಯೋಜನಾ ವಿಜ್ಞಾನಿಗಳು ಮತ್ತು 02 ಸಹಾಯಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುತ್ತಾರೆ.

ಮೈಸೂರು 

ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೆಂದ್ರದ ಮೈಸೂರು ಪ್ರಾದೇಶಿಕ ಕೇಂದ್ರವನ್ನು 2004 ರಲ್ಲಿ ಮೈಸೂರು ಜಿಲ್ಲೆಯ ಎಲ್‍ಆರ್‍ಐಎಸ್ ಯೋಜನೆ ಹಾಗೂ ಪ್ರಾಕೃತಿಕ ಸಂಪನ್ಮೂಲ ಮಾಹಿತಿ ವ್ಯವಸ್ಥೆಯಡಿಯ ಎಲ್‍ಆರ್‍ಡಿ ಮತ್ತು ಸಿಆರ್‍ಡಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಎಸ್‍ಜೆಸಿಇ ಆವರಣದಲ್ಲಿ ಸ್ಥಾಪಿಸಲಾಯಿತು. ಇದಲ್ಲದೆ ರಾಜ್ಯ ಸರ್ಕಾರದ ಇಲಾಖೆಗಳಿಗೆ ಅಗತ್ಯವಿರುವ ಉಪಗ್ರಹ ಮಾಹಿತಿ ದತ್ತಾಂಶವನ್ನು ಸಿದ್ದಪಡಿಸಿ ಒದಗಿಸುವ ಕಾರ್ಯವನ್ನು ಕೇಂದ್ರವು ಕೈಗೊಳ್ಳುತ್ತಿದೆ. ಈ ಕೇಂದ್ರವು ನಿರ್ಣಯ ಕೈಗೊಳ್ಳುವ ಅಧಿಕಾರಿಗಳು, ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಸರ್ಕಾರೇತರ ಸಂಸ್ಥೆಗಳ ಅಧಿಕಾರಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸಹ ಆಯೋಜಿಸುತ್ತಿದೆ. ಪ್ರಸ್ತುತ 19 ತಾಂತ್ರಿಕ ಮತ್ತು ಇತರ ಸಿಬ್ಬಂದಿಗಳು ಈ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

 

mysore_reg