ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ ಕುರಿತ ಒಂದು ದಿನದ ಕಾರ್ಯಾಗಾರ

ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ (ಕೆ-ಜಿಐಎಸ್) ಕುರಿತ ಒಂದು ದಿನದ ಕಾರ್ಯಗಾರವನ್ನು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ಮತ್ತು ಕರ್ನಾಟಕ ಜ್ಞಾನ ಆಯೋಗ ಇವರು ಬೆಂಗಳೂರಿನಲ್ಲಿ ದಿನಾಂಕ: 23-01-2013 ರಲ್ಲಿ ಆಯೋಜಿಸಿದರು. ರಾಜ್ಯದ ವಿವಿಧ ಇಲಾಖೆಗಳು ಮತ್ತು ರಾಜ್ಯ ಮತ್ತು ರಾಷ್ಟ್ರದ ಪ್ರಮುಖ ತಜ್ಞರು ಬಳಕೆದಾರರ ಅಗತ್ಯತೆಗಳನ್ನು ಪರಿಗಣಿಸಿ ಕೆ-ಜಿಐಎಸ್‍ಗಾಗಿ ಸಿದ್ದಪಡಿಸಿದ ಡ್ರಾಫ್ಟ್‍ವಿಷನ್ ಅನ್ನು ಪರಿಗಣಿಸಲಾಯಿತು. ಈ ಕಾರ್ಯಾಗಾರದ ಉದ್ದೇಶವು ಸರ್ಕಾರ, ಉದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳ ನಡುವೆ ಸಮಾಲೋಚನೆಗಾಗಿ ವಿಶಾಲ ವೇದಿಕೆ ಒದಗಿಸುವುದಾಗಿತ್ತು. ಸರ್ಕಾರದ ಬಾಗೀದಾರರು, ತಂತ್ರಜ್ಞಾನ ಪೂರೈಕೆದಾರರು, ಉದ್ಯಮ, ಸಂಶೋಧನಾ ಸಮುದಾಯ, ನೀತಿ ನಿರೂಪಕರು ಮುಂತಾದ ಸಂಸ್ಥೆಗಳ 220 ಕ್ಕೂ ಹೆಚ್ಚಿನ ಪ್ರತಿನಿಧಿಗಳು ಭಾಗವಹಿಸಿದ್ದರು. ಉದ್ಘಾಟನಾ ಅಧಿವೇಶನ ಒಳಗೊಂಡಂತೆ ಕೆ-ಜಿಐಎಸ್ ಅನುಷ್ಠಾನಕ್ಕೆ ಮೀಸಲಾದ ಎರಡು ಅಧಿವೇಶನಗಳನ್ನು ಒಳಗೊಂಡು ಉನ್ನತ ಮಟ್ಟದ ಸಮಿತಿ ಚರ್ಚೆಯಲ್ಲಿ ಅಂತ್ಯಗೊಂಡಿತು. ಈ ಕಾರ್ಯಾಗಾರವನ್ನು ಭಾರತ ಸರ್ಕಾರದ ಭೂ ವಿಜ್ಞಾನಗಳ ಸಚಿವಾಲಯದ ಕಾರ್ಯದರ್ಶಿ ಡಾ|| ಶೈಲೇಶ್ ನಾಯಕ್ ಇವರು ಉದ್ಘಾಟಿಸಿದರು. ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ವಿವಿಧ ಕ್ಷೇತ್ರಗಳಲ್ಲಿ ಆಧುನಿಕ ಜಿಐಎಸ್ ತಂತ್ರಜ್ಞಾನಗಳ ವ್ಯಾಪಕ ಪಾತ್ರಗಳನ್ನು ವಿವರಿಸಿದರು.
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀ. ಎಸ್. ವಿ. ರಂಗನಾಥ್ ರವರು ಆಡಿಚಿಜಿಣ visioಟಿ ಮತ್ತು ಬಳಕೆದಾರರ ಅಗತ್ಯತೆಗಳ ಬಗ್ಗೆ ತಿಳಿಸಿದರು. ಆಡಳಿತವನ್ನು ಬೆಂಬಲಿಸಲು ಮತ್ತು ವಿಶೇಷವಾಗಿ ರಾಜ್ಯದ ಜನರಿಗೆ ಅಧಿಕಾರ ನೀಡುವ ಪ್ರಮುಖ ಬೆಂಬಲ ಸಾಧನವಾಗಿ ಕೆ-ಜಿಐಎಸ್ ಕಾರ್ಯತತ್ವವಾಗಲು ಸರ್ಕಾರ ಬದ್ಧವಾಗಿರುವುದಾಗಿ ಒತ್ತಿ ಹೇಳಿದರು.
ಚರ್ಚಾ ಪ್ಯಾನಲ್ ಸದಸ್ಯರು ಈ ಕೆಳಗಿನ ಅಂಶಗಳನ್ನು ಚರ್ಚೆಗಾಗಿ ಪರಿಚಯಿಸಿದರು.
•    ಕೆ-ಜಿಐಎಸ್ ನವೀನ ಜ್ಞಾನ ಆಧಾರಿತ ಚಟುವಟಿಕೆಯಾಗಿದ್ದು, ಪ್ರಸ್ತುತ ಕಾಲದ ಅಗತ್ಯತೆಯಾಗಿದೆ. ಇದರಲ್ಲಿ ಸರ್ಕಾರ, ಉದ್ಯಮ, ಶೈಕ್ಷಣಿಕ ಮತ್ತು ಸರ್ಕಾರೇತರ ಸಂಸ್ಥೆಗಳ ಪಾಲ್ಗೊಳ್ಳುವಿಕೆ ಅಗತ್ಯವಿರುತ್ತದೆ ಹಾಗೂ ನಾಗರಿಕರಿಗೆ ಜಿಐಎಸ್ ಮಾಹಿತಿ ಲಭ್ಯತೆಯ ಅಗತ್ಯತೆ ಮತ್ತು ಸೇವೆಯನ್ನು ಗಮನದಲ್ಲಿರಿಸಿ ಕೊಳ್ಳಬೇಕಿರುತ್ತದೆ.
•    ಇಡೀ ರಾಜ್ಯಕ್ಕೆ ಆಸ್ತಿ ದತ್ತಾಂಶವನ್ನು ಕಾಲಕಾಲಕ್ಕೆ ಇಂದೀಕರಿಸಿ, ಮೌಲ್ಯೀಕರಿಸಿ ಸೀಮಾ ರಹಿತವಾಗಿ ಸಿದ್ದಗೊಳಿಸಲಾಗುತ್ತದೆ. 
•    ಕೆ-ಜಿಐಎಸ್ ಅನ್ನು ಕರ್ನಾಟಕ ಸರ್ಕಾರದ ಇಲಾಖೆಗಳಿಗೆ ಅಗತ್ಯ ಅನ್ವಯಿಕೆಗಳಿಗೆ ಪ್ರವೇಶಿಸುವ ಮತ್ತು ಹಂಚಿಕೊಳ್ಳುವ ಸೇವೆ ಒದಗಿಸಲು ಒಂದು ವೇದಿಕೆಯಾಗಿಸುವ ಪರಿಕಲ್ಪನೆಯಲ್ಲಿ ಸಂಯೋಜಿಸಲಾಗಿದೆ. 
•    ಆಸ್ತಿ ಮಾಹಿತಿಯು ನವೀಕರಿಸಿ, ಪ್ರಮಾಣೀಕರಿಸಲ್ಪಟ್ಟು, ಸೀಮಾರಹಿತವಾಗಿ ಇಡೀ ರಾಜ್ಯಕ್ಕೆ ಜಿಐಎಸ್‍ನಡಿ ಸಿದ್ದಪಡಿಸಲ್ಪಡುತ್ತದೆ.
•    ಹಿಂದಿನ ಯೋಜನೆಗಳಿಂದ ವಿವಿಧ ಸಂಪನ್ಮೂಲಗಳ ಬಗ್ಗೆ ಉತ್ಪತ್ತಿಯಾದ ಮಾಹಿತಿ ಸಂಚಯವನ್ನು ಫಲಪ್ರದವಾಗಿ ಉಪಯೋಗಿಸಿಕೊಳ್ಳಬೇಕು. ಮುಕ್ತ ಮೂಲಗಳಿಂದ ದೊರೆಯುವ ಜಿಐಎಸ್ ಮಾಹಿತಿಯ ಅನುಕೂಲವನ್ನು ಪಡೆಯಬೇಕು.
•    ಕೃಷಿ ಸಮುದಾಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಐಎಸ್ ಮಾಹಿತಿಯನ್ನು ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲೂ ಲಭ್ಯಗೊಳಿಸಬೇಕು.
•    ವಸ್ತು ಗುರುತಿಸುವಿಕೆ ಮತ್ತು ಉಪಗ್ರಹ ಚಿತ್ರ ಹಾಗೂ ಇತರೆ ರೀತಿಯ ಮಾಹಿತಿಗಳಿಂದ ಸ್ವಯಂ ಚಾಲಿತವಾಗಿ ಬದಲಾವಣೆ ಪತ್ತೆಹಚ್ಚುವಿಕೆಯ ವಿಷಯದಲ್ಲಿ ಉನ್ನತ ಮಟ್ಟದ ಸಂಶೋಧನೆಯನ್ನು ಶೈಕ್ಷಣಿಕ ಸಂಸ್ಥೆಗಳು ಕೈಗೊಳ್ಳಬೇಕು.
•    ಪ್ರತಿ ಆಸ್ತಿಯ (ನಗರ/ಗ್ರಾಮೀಣ) ಜಿಯೋಟ್ಯಾಗಿಂಗ್ ಅಗತ್ಯವಿರುತ್ತದೆ ಮತ್ತು ಬದಲಾವಣೆಗಳಾಗುವಾಗ ಪರಿಷ್ಕರಣೆ / ಸಮೀಕ್ಷೆಯ ಆಧಾರದ ಮೇಲೆ ದತ್ತಾಂಶ ನವೀಕರಣೆ ಅಗತ್ಯವಿರುತ್ತದೆ, ಕೀmಗಳು ಮತ್ತು ರೋಗಗಳ ಬಗ್ಗೆ ಸ್ವಯಂಚಾಲಿತವಾಗಿ ಪರಿಶೀಲಿಸಿ ಮುನ್ಸೂಚನೆ ನೀಡಬಲ್ಲ ಅನ್ವಯಿಕೆಗಳ ಕಾರ್ಯಸಾಧ್ಯತೆಯನ್ನು ಶೋಧಿಸಬೇಕು.