ಬಳ್ಳಾರಿ ಜಿಲ್ಲೆಯಲ್ಲಿ IRDP ಮತ್ತು SIS-DP ಕುರಿತ ಒಂದು ದಿನದ ಕಾರ್ಯಾಗಾರ

ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರವು ಬಳ್ಳಾರಿ ಜಿಲ್ಲೆಯ ಈ ಕೆಳಕಂಡ ತಾಲ್ಲೂಕುಗಳಲ್ಲಿ ಅಧಿಕಾರಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು. ಪ್ರತಿ ತಾಲ್ಲೂಕಿನಲ್ಲಿ ಕಾರ್ಯಾಗಾರವನ್ನು ಅಲ್ಲಿನ ಕಾರ್ಯನಿರ್ವಾಹಕ ಅಧಿಕಾರಿಯವರು ಉದ್ಘಾಟಿಸಿದರು. ಕರಾದೂಸಂಅಕೇಂದ್ರದ ವಿಜ್ಞಾನಿಗಳು ಮತ್ತು ಸಮಾಲೋಚಕರಾದ ಡಾ|| ಅಶೋಕ ರೆಡ್ಡಿ, ಡಾ|| ಪಿ. ಪಿ. ನಾಗೇಶ್ವರ ರಾವ್, ಶ್ರೀ. ಹರೀಂದ್ರನಾಥ್ ಹಾಗೂ ಶ್ರೀ. ಸಲೀಂ ಐ ಶೇಕ್ ಇವರುಗಳು ಉಪಸ್ಥಿತರಿದ್ದರು.

ಡಾ|| ಅಶೋಕ ರೆಡ್ಡಿ ಇವರು ಅಧಿಕಾರಿಗಳನ್ನು ಸ್ವಾಗತಿಸಿ ಬಳ್ಳಾರಿ ಜಿಲ್ಲೆಯಲ್ಲಿ SIS-ಆP ಮತ್ತು IಖಆP ಯೋಜನೆಯ ಪರಿಕಲ್ಪನೆ ಮತ್ತು ಉದ್ದೇಶಗಳನ್ನು ವಿವರಿಸಿದರು. ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು ಮತ್ತು ಕಾರ್ಯಾಗಾರದ ಉದ್ಘಾಟನೆ ಮಾಡಿದರು ಹಾಗೂ ಎಲ್ಲಾ ಅಧಿಕಾರಿಗಳು ಈ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸೂಚಿಸಿದರು. 

ಕಾರ್ಯಾಗಾರಗಳ ವಿವರಗಳು

Image removed.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆಯೋಜಿತ MGNREGA ಮುಂತಾದ ಯೋಜನೆಗಳ ಪ್ರಸ್ತಾವನೆ ಹಾಗೂ ವರದಿಗಳನ್ನು ಸಿದ್ದಪಡಿಸಿ ಸಲ್ಲಿಸುವಲ್ಲಿ SIS-DP ಯೋಜನೆಯ ಭೌದೇಶಿಕ ದತ್ತಾಂಶಗಳ ಮಹತ್ವವನ್ನು         ಡಾ|| ಪಿ. ಪಿ. ನಾಗೇಶ್ವರ್‍ರಾವ್ ಇವರು ವಿವರಿಸಿದರು. 

IRDP ಯೋಜನೆಯಡಿ ಭೌದೇಶಿಕ ಮಾಹಿತಿ ಹಿನ್ನಲೆಯಲ್ಲಿ ಒಂದು ಗ್ರಾಮ ಪಂಚಾಯತ್‍ನ ಮಣ್ಣು ವಿಧಗಳ ಬಗ್ಗೆ ಗ್ರಾಮ ಮಟ್ಟದಲ್ಲಿ ಸಿದ್ದಪಡಿಸಿದ ದತ್ತಾಂಶ ಸಂಚಯದ ವಿವರಗಳನ್ನು ಶ್ರೀ. ಸಿ. ಎಸ್. ಹರೀಂದ್ರನಾಥ್ ಇವರು ವಿವರಿಸಿದರು. ಈ ಮಾಹಿತಿಯು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಹೇಗೆ ಸಹಕಾರಿ ಎಂಬುದನ್ನು ವಿವರಿಸಿದರು.