ಕರ್ನಾಟಕ ಭೌದೇಶಿಕ ದತ್ತಸಂಚಯ ಸಮ್ಮೇಳನ-ಡಿಸೆಂಬರ್ 2010

2010 ಡಿಸೆಂಬರ್ 28 ರಂದು ಯುವನಿಕಾದಲ್ಲಿ ಜರುಗಿದ ಕರ್ನಾಟಕ ಭೌದೇಶಿಕ ದತ್ತಸಂಚಯ ಸಮ್ಮೇಳನವನ್ನು ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರವು  ಆಯೋಜಿಸಿತ್ತು. ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ಬಳಕೆದಾರ ಏಜೆನ್ಸಿಗಳ ಮತ್ತು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಜನರ ನಡುವೆ ಮಧ್ಯವರ್ತಿ ಸಂಸ್ಥೆಯಾಗಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಮತ್ತು ಅನುಷ್ಠಾನಗೊಳಿಸಲು ಅವಶ್ಯಕ ಭೌದೇಶಿಕ ಮಾಹಿತಿ ದತ್ತಾಂಶಗಳನ್ನು ಒದಗಿಸುತ್ತಿದೆ.  ಕರಾದೂಸಂಅಕೇಂದ್ರದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಆಯೋಜಿಸಲಾದ ಈ ಸಮ್ಮೇಳನವು ಈ ಕೇಂದ್ರದ ಚಟುವಟಿಕೆಗಳ ಗಮನಾರ್ಹ ಸಂಗತಿಯಾಗಿದೆ.