“ಸಂಪನ್ಮೂಲ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ಜಿಯೋ ಸ್ಪೇಷಿಯಲ್ ಸಲ್ಯೂಷನ್ಸ್” ರಾಷ್ಟ್ರೀಯ ಸಮ್ಮೇಳನ

ಕರಾದೂಸಂಅಕೇಂದ್ರವು ಸಂಪನ್ಮೂಲ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ಜಿಯೋಸ್ಪೆಷಿಯಲ್ ಸಲ್ಯೂಷನ್ಸ್ ಎಂಬ ರಾಷ್ಟ್ರೀಯ ಸಮ್ಮೇಳನವನ್ನು 18-19 ನೇ ಜನವರಿ, 2012 ರಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಜೆ ಎಸ್ ಟಾಟಾ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಸಮ್ಮೇಳನವನ್ನು ಭಾರತ ಯೋಜನಾ ಆಯೋಗದ ಸದಸ್ಯರು, ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರು ಆದ ಡಾ|| ಕಸ್ತೂರಿ ರಂಗನ್ ಅವರು ಉದ್ಘಾಟಿಸಿದರು. ದೇಶದ 280 ವಿಜ್ಞಾನಿಗಳು ಸಮ್ಮೇಳನದಲ್ಲಿ ಭಾಗವಹಿಸಿ 72 ಪ್ರಬಂದಗಳನ್ನು ಕೃಷಿ, ಮಣ್ಣು ಸಂಪನ್ಮೂಲ, ಭೂ ಬಳಕೆ / ಭೂ ಹೊದಿಕೆ, ಜಲಾನಯನ ನಿರ್ವಹಣೆ, ಬೆಳೆ ವಿಸ್ತೀರ್ಣ ಮತ್ತು ಇಳುವರಿ ಅಂದಾಜು, ಭೂ ಮತ್ತು ಜಲಸಂಪನ್ಮೂಲಗಳು, ಪೆಟ್ರೋಲಿಯಂ ಮತ್ತು ಖನಿಜಗಳು, ಪರಿಸರ ಮತ್ತು ವಿಪತ್ತು ನಿರ್ವಹಣೆ, ಅರಣ್ಯ ಸಂಪನ್ಮೂಲಗಳು, ಪ್ರವಾಸೋದ್ಯಮ ಮತ್ತು ಪುರಾತತ್ವ ಶಾಸ್ತ್ರ, ಸಾಗರ ಸಂಪನ್ಮೂಲ ನಿರ್ವಹಣೆ ಮತ್ತು ನಗರÀ ಮತ್ತು ಗ್ರಾಮಾಂತರ ಯೋಜನೆ ಇಂತಹ 11 ತಾಂತ್ರಿಕ ಸಭೆಗಳಲ್ಲಿ ಮಂಡಿಸಲಾಯಿತು.