ಭೋದಕ ವರ್ಗ

ಬೆಂಗಳೂರಿನ ಇಸ್ರೋ, ಐಐಎಸ್‍ಸಿ, ಐ.ಐ.ಎಂ, ಆರ್.ಆರ್.ಎಸ್,ಸಿ ಯಂತಹ ಪ್ರತಿಷ್ಠಿತ ಸಂಸ್ಥೆಗಳಿಂದ ಅಧ್ಯಾಪಕರನ್ನು ಆಯ್ಕೆ ಮಾಡಲಾಗಿದೆ. ಇದರೊಂದಿಗೆ ರಾಷ್ಟ್ರೀಯ ದೂರ ಸಂವೇದಿ ಕೇಂದ್ರ, ಅಹಮದಾಬಾದ್, ಡೆಹ್ರಾಡುನ್ ರಾಷ್ಟ್ರೀಯ ದೂರ ಸಂವೇದಿ ಕೇಂದ್ರ ಮತ್ತು ಭಾರತೀಯ ದೂರ ಸಂವೇದಿ ಸಂಸ್ಥೆ, ಇವರೊಂದಿಗೆ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದದ್ರ ವಿಜ್ಞಾನಿಗಳು ಸಹ ಭೋಧನೆಯಲ್ಲಿ ನಿರತರಾಗಿರುತ್ತಾರೆ ಹಾಗೂ ಇದೇ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ವಿಭಿನ್ನ ಡೊಮೈನ್‍ಗಳಲ್ಲಿ ಪರಿಣಿತಿ ಹೊಂದಿರುವ ಸುಮಾರು ನೂರು ಯೋಜನಾ ವಿಜ್ಞಾನಿಗಳು ಸಹ ಸಮಾಲೋಚನೆಗಾಗಿ ವಿದ್ಯಾರ್ಥಿಗಳಿಗೆ ಲಭ್ಯವಿರುತ್ತಾರೆ.