ಅವಧಿ ಮತ್ತು ಪಠ್ಯಕ್ರಮ

  • ಮೊದಲ ಸೆಮಿಸ್ಟರ್‍ಗೆ 18 ವಾರಗಳ ತರಗತಿ ಕಾಲವಿದ್ದು, ನಂತರ ಐದು ವಾರಗಳ ಪರೀಕ್ಷೆ ಮತ್ತು ರಜೆಯನ್ನೊಳಗೊಂಡಿರುತ್ತದೆ. ವಿದ್ಯಾರ್ಥಿಗಳು ನಾಲ್ಕು ಪ್ರಮುಖ ವಿಷಯಗಳ ಬಗ್ಗೆ ಅಧ್ಯಯನ ಮಾಡಬೇಕು ಮತ್ತು ಮೊದಲ ಮತ್ತು ಎರಡನೆಯ ಸೆಮಿಸ್ಟರ್‍ನಲ್ಲಿ 100 ಅಂಕಗಳಿಗೆ ಒಂದು ಐಚ್ಚಿಕ ವಿಷಯವನ್ನು ಅಧ್ಯಯನ ಮಾಡಬೇಕು.
  • ಎರಡನೆಯ ಸೆಮಿಸ್ಟರ್ 18 ವಾರಗಳ ತರಗತಿ ಕಾಲಾವಧಿ ಹೊಂದಿರುತ್ತದೆ. ನಂತರ ಮೂರು ವಾರಗಳ ಪರೀಕ್ಷೆ ಮತ್ತು ರಜಾ ದಿನಗಳಿರುತ್ತವೆ.
  • ಮೂರನೇ ಸೆಮಿಸ್ಟರ್ ಎರಡನೆ ಹಂತದ ಯೋಜನಾ ಕೆಲಸ (Pಡಿoರಿeಛಿಣ ತಿoಡಿಞ) ವನ್ನು ಒಳಗೊಂಡಿದ್ದು, ಇದರೊಟ್ಟಿಗೆ ಒಂದು ಪ್ರಮುಖ ವಿಷಯ ಹಾಗೂ ಎರಡು ಐಚ್ಚಿಕ ವಿಷಯಗಳನ್ನು ಅಭ್ಯಯಿಸಬೇಕು ತದನಂತರ, ನಾಲ್ಕು ವಾರಗಳ ರಜೆಯಿರುತ್ತದೆ. ನಾಲ್ಕನೇ ಸೆಮಿಸ್ಟರ್ 20 ವಾರಗಳ ಯೋಜನಾ ಕಾರ್ಯವನ್ನೊಳಗೊಂಡಿರುತ್ತದೆ. ಈ ಹೊಸ ಯೋಜನೆಯಲ್ಲಿ ಯೋಜನಾ ಕಾರ್ಯವು 3 ಸೆಮಿಸ್ಟರ್‍ಗಳವರೆಗೆ ವಿಸ್ತಾರಗೊಂಡಿದ್ದು, ವಿದ್ಯಾರ್ಥಿಯು ಯೋಜನಾ ಕಾರ್ಯಚಟುವಟಿಕೆಯ ಹಲವಾರು ಅಂಶಗಳ ಮೇಲೆ ಪಾಂಡಿತ್ಯವನ್ನು ಹೊಂದಬಹುದಾಗಿರುತ್ತದೆ. ಪ್ರಬಂಧ ಸಿದ್ದಪಡಿಸುವಿಕೆ ಮತ್ತು ಮೌಖಿಕ ಪರೀಕ್ಷೆಯು 8 ವಾರಗಳ ಅವಧಿಯದ್ದಾಗಿರುತ್ತದೆ.

ಮೊದಲ ಎರಡು ಸೆಮಿಸ್ಟರ್‍ಗಳು ಜಿಯೋಇನ್ಫಾಮ್ರ್ಯಾಟಿಕ್ಸ್ ವರದಿಯ ಸೈದ್ಧಾಂತಿಕ ತಳಹದಿ ಹಾಗೂ ಪ್ರಾಯೋಗಿಕ ನೈಪುಣ್ಯತೆಯನ್ನು ಅಭಿವೃದ್ಧಿಪಡಿಸುವತ್ತ ಕೇಂದ್ರೀಕೃತಗೊಂಡಿರುತ್ತವೆ. ಮೂರನೇ ಮತ್ತು ನಾಲ್ಕನೇ ಸೆಮಿಸ್ಟರ್‍ಗಳಲ್ಲಿ ಯೋಜನಾ ಕಾರ್ಯ ಸಾಮಥ್ರ್ಯ ವರ್ಧನೆ ಕಡೆಗೆ ಕೇಂದ್ರೀಕೃತಗೊಂಡಿರುತ್ತದೆ. ವಿಚಾರತಗೋಷ್ಠಿಗಳು, ಗುಂಪು ಚರ್ಚೆಗಳು, ಕಾರ್ಯಯೋಜನೆಗಳು, ಕಿರುಯೋಜನೆಗಳು, ಸೆಮಿಸ್ಟರ್ ಪರೀಕ್ಷೆಗಳು, ಪ್ರಶ್ನಾವಳಿಗಳು, ಮೌಖಿಕ ಪರೀಕ್ಷೆ, ಸಂಶೋಧನಾ ಲೇಖನ ಬರವಣೆಗೆ, ಆನ್ಲೈನ್ ಮದ್ಯಾವದಿ ಮತ್ತು ಅಂತಿಮ ಸೆಮಿಸ್ಟರ್ ಪರೀಕ್ಷೆ ಇವು ವಿದ್ಯಾರ್ಥಿಯ ಅರಿವಿನ ವಿಶ್ಲೇಷಣಾತ್ಮಕ ಸಾಮಥ್ರ್ಯಗಳನ್ನು ಅಭಿವೃದ್ದಿಗೊಳಿಸಲು ವಿವೇಚನಾಯುತವಾಗಿ ಹೊಂದಾಣಿಸ್ಪಟ್ಟಿವೆ.

ಎಂ. ಟೆಕ್ ಪಠ್ಯಕ್ರಮ