ಎಂ.ಟೆಕ್

ಪ್ರಾಕೃತಿಕ ಸಂಪನ್ಮೂಗಳ ಮತ್ತು ನಗರ ಮೂಲಭೂತ ಸೌಕರ್ಯಗಳ ಬಗ್ಗೆ ಭೌಗೋಳಿಕ ಮಾಹಿತಿ ತಾಂತ್ರಿಕತೆಗಳನ್ನು ಬಳಸಿ ಭೂದೈಶಿಕ ದತ್ತಾಂಶ ತಯಾರಿಕೆ ಮತ್ತು ನಿರ್ವಹಣೆ ಕೈಗೊಳ್ಳಬಲ್ಲಂತಹ ಅರ್ಹ ವೃತ್ತಿ ಪರರ ಕೊರತೆ ನೀಗಿಸಲು ಹಾಗೂ ಈ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವ ವೃತ್ತಿ ಪರರಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕರಾದೂಸಂಅ ಕೇಂದ್ರವು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಸರ್ವೇ ಆಫ್ ಇಂಡಿಯಾ ಇವರ ಸಹಯೋಗದಲ್ಲಿ 2004-05 ನೇ ಸಾಲಿನಿಂದ ಎಂ.ಟೆಕ್‍ ಜಿಯೋಇನ್‍ಫಾರ್‍ಮ್ಯಾಟಿಕ್ಸ್ ಸ್ನಾತಕೋತ್ತರ ಪದವಿ ಕಾರ್ಯಕ್ರಮ ಪ್ರಾರಂಭಿಸಿದೆ. ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಕನಿಷ್ಠ 50% ಸರಾಸರಿ ಅಂಕಗಳೊಂದಿಗೆ ಬಿ.ಇ ಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಈ ಕೋರ್ಸಿಗೆ ಸೇರಲು ಅರ್ಹತೆ ಹೊಂದಿರುತ್ತಾರೆ. ವಿ.ಟಿ.ಯು ನಡೆಸುವ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಮತ್ತು ಶ್ರೇಣಿ ಹಾಗೂ ಕೌನ್ಸಿಲಿಂಗ್‍ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.

ಈ ಕಾರ್ಯಕ್ರಮವು ಮುಂಚೂಣಿ ತಂತ್ರಜ್ಞಾನಗಳಾದ ದೂರ ಸಂವೇದನೆ, ಭೌಗೋಳಿಕ ಮಾಹಿತಿ ವ್ಯವಸ್ಥೆ, ಭೌಗೋಳಿಕ ಸ್ಥಾನ ನಿರ್ದರಣಾ ವ್ಯವಸ್ಥೆ, ಅಂಕ್ಯಾತ್ಮಕ ಛಾಯಾಚಿತ್ರ ವಿಶ್ಲೇಷಣೆ, ವೆಬ್, ಆರ್ಟಿಫಿಷಿಯಲ್‍ ಇಂಟಲಿಜೆನ್ಸ್ ಮತ್ತು ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಪಠ್ಯ ಮತ್ತು ಪ್ರಾಯೋಗಿಕ ಜ್ಞಾನವನ್ನು ಒದಗಿಸುವ ಸಲುವಾಗಿ ಯೋಜನೆ ನಿರ್ವಹಣೆ, ಪ್ರಾಕೃತಿಕ ಸಂಪನ್ಮೂಲ ನಿರ್ವಹಣೆ, ಜಲ ಸಂಪನ್ಮೂಲ ನಿರ್ವಹಣೆ ಮತ್ತು ಪ್ರಕೃತಿ ವಿಕೋಪ ನಿರ್ವಹಣೆಗಳಿಗೆ ಸಂಬಂಧಿಸಿದ ಆಧುನಿಕ ವಿಷಯಗಳನ್ನೊಳಗೊಂಡಿದೆ.ಇಸ್ರೋ, ಸರ್ವೇ ಆಫ್ ಇಂಡಿಯಾ ಮುಂತಾದ ಘನತೆವೆತ್ತ ಸಂಸ್ಥೆಗಳ ಪರಿಣಿತರು ಭೋದಕ ಸೇವೆಯನ್ನು ಒದಗಿಸುತ್ತಿರುತ್ತಾರೆ.ಇದು ಉದ್ಯೋಗ ಮುಖಿಯಾಗಿದ್ದು, ಉದ್ದಿಮೆಗೆ ಔಚಿತ್ಯವಾದ ಅಧ್ಯಯನವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಕೇಂದ್ರದಲ್ಲಿ ಯೋಜನಾ ಕಾರ್ಯಕೈಗೊಳ್ಳುವಾಗ ನೈಜ ವಿಶ್ವಯೋಜನೆಗಳ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿಸಲಾಗುವುದು.ಇಲ್ಲಿನ ಪಧವೀದರರು ಬಹು ರಾಷ್ಟ್ರೀಯ ಕಂಪನಿಗಳು, ಕಾಲೇಜು ಮತ್ತು ಸರ್ಕಾರದ ಇಲಾಖೆಗಳಲ್ಲಿ ಉದ್ಯೋಗಿಗಳಾಗಿದ್ದಾರೆ.