ಕೇಂದ್ರದ ಬಗ್ಗೆ

ksrsac logo

ಕರ್ನಾಟಕವು ಚಿನ್ನ, ಶ್ರೀಗಂಧ ಮತ್ತು ರೇಷ್ಮೆಯ ಶ್ರೀಮಂತಿಕೆ ನಾಡು.ನೈಸರ್ಗಿಕ ಸಂಪನ್ಮೂಲಗಳಾದ ಖನಿಜಗಳು, ನೀರು, ಅರಣ್ಯ ಮತ್ತು ಫಲವತ್ತಾದ ಭೂಮಿ ಹಾಗೂ ಉಷ್ಣವಲಯದ ಹವಾಮಾನವನ್ನು ಹೊಂದಿರುವ ಸಂಪದ್ಭರಿತ ರಾಜ್ಯ.ಸಮತಟ್ಟಾದ ಭೂಮಿ, ಕರಾವಳಿ ಪ್ರದೇಶ, ಶುಶ್ಕ ವಲಯ ಮತ್ತು ಪಶ್ಚಿಮ ಘಟ್ಟಗಳನ್ನೊಳಗೊಂಡಂತೆ 30 ಜಿಲ್ಲೆಗಳಿರುವ ನಾಡು. ಇಲ್ಲಿ 10 ಕೃಷಿ ವಲಯಗಳಿದ್ದು ಪ್ರತಿಯೊಂದು ವಲಯವು ಸಹ ವಿಶಿಷ್ಟವಾದ ಲಕ್ಷಣಗಳನ್ನೊಳಗೊಂಡಿದೆ.ದೇಶದಲ್ಲಿಯೇ ಎರಡನೆಯ ಅತಿ ಹೆಚ್ಚು ಮಳೆ ಬೀಳುವ ತಾಣವಾದ ಆಗುಂಬೆಯನ್ನು ಹೊಂದಿರುವುದರ ಜೊತೆಗೆ ವಿಸ್ತಾರವಾದ ಪಾಳು ಭೂಮಿಯನ್ನೂ ಸಹ ಹೊಂದಿರುವುದು ವಿಪರ್ಯಾಸದ ಸಂಗತಿ.ನಿರಂತರವಾಗಿ ಬಯಲಾಗುತ್ತಿರುವ ಅರಣ್ಯಗಳು, ಅವನತಿಗೊಳ್ಳುತ್ತಿರುವ ಮಣ್ಣು, ಕಲ್ಮಶಗೊಳ್ಳುತ್ತಿರುವ ಜಲ ಸಂಗ್ರಹಗಳು, ನಶಿಸಿ ಹೋಗುತ್ತಿರುವ ವನ್ಯಜೀವಿಗಳು ಮತ್ತು ಕ್ಷೀಣಿಸುತ್ತಿರುವ ಕೃಷಿ ಪರಿಸರ ಇವು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಆಗಾದಗೊಳಿಸಿ ಭವಿಷ್ಯದ ಘಟನಾವಳಿಯನ್ನು ಕಳೆಗುಂದಿಸುತ್ತಿದ್ದು, ಇದಕ್ಕೆ ಸಕ್ರಿಯಾತ್ಮಕವಾಗಿ ಸ್ಫಂದಿಸಿ ಮುಂದೊದಗಬಹುದಾದ ಅವನತಿಯನ್ನು ತಪ್ಪಿಸುವುದು ಅವಶ್ಯಕವಾಗಿದೆ. ದೇಶದ ಜನಸಂಖ್ಯೆಯ 5.13 ರಷ್ಟುಕರ್ನಾಟಕದಲ್ಲಿದ್ದು, ಶೇ. 5.83 ರಷ್ಟು ಭೌಗೋಳಿಕ ವ್ಯಾಪ್ತಿಯನ್ನು ರಾಜ್ಯ ಹೊಂದಿದೆ.ಆದಾಗ್ಯೂ ಸಹ ಶೇ.20 ರಷ್ಟು ಜನಸಂಖ್ಯೆಯು ಬಡತನದ ರೇಖೆಯ ಕೆಳಗಿರುತ್ತಾರೆ.ಶೇ.33.4 ರಷ್ಟುಅನಕ್ಷರಸ್ಥರು ಇಲ್ಲಿದ್ದು, ಶಿಶು ಮರಣವು ಶೇ.5.5 ರಷ್ಟಿರುತ್ತದೆ.ನಿರಂತರವಾಗಿ ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಕ್ಷಿಪ್ರಕೈಗಾರಿಕೀಕರಣವು ಭೂಮಿಯ ಹೊರರೂಪವನ್ನುಬದಲಾಯಿಸುವುದರ ಜೊತೆಗೆ ಕಳವಳಕಾರಿ ಮಟ್ಟದಲ್ಲಿ ಹವಾಮಾನದ ಅವನತಿಗೂ ಕಾರಣವಾಗುತ್ತಿದೆ.

ನಿರ್ಣಾಯಕ ಸಂದರ್ಭಗಳಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಮತ್ತು ಸೂಕ್ತ ಹಾಗೂ ಸಕಾಲಿಕ ನಿರ್ಣಯಗಳನ್ನು ಕೈಗೊಳ್ಳಲು ಕಡಿಮೆ ವೆಚ್ಚದಲ್ಲಿ ದೊರೆಯುವ ಪ್ರಾದೇಶಿಕ ವ್ಯಾಪ್ತಿಯುಳ್ಳ, ಸಮಾನಾರ್ಥಕ, ಸಿದ್ಧಲಭ್ಯ, ಪ್ರದೇಶ ನಿರ್ದಿಷ್ಟ, ಪ್ರಾದೇಶಿಕ ಮತ್ತು ಪ್ರಾದೇಶಿಕವಲ್ಲದ ಮಾಹಿತಿ ಅತ್ಯಗತ್ಯ.ಪ್ರಪಂಚದಾದ್ಯಂತ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ಪ್ರಾದೇಶಿಕ ಪರಿಕಲ್ಪನೆ ಮತ್ತು ಅದರ ಬಳಕೆಯು ಅನಿವಾರ್ಯವಾಗಿದೆ. ನಿಟ್ಟಿನಲ್ಲಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಕರ್ನಾಟಕ ರಾಜ್ಯವು ಸಂಸ್ಥೆ ಮತ್ತು ಮಾನವ ಸಂಪನ್ಮೂಲವನ್ನು ಅಭಿವೃದ್ಧಿಗೊಳಿಸಬೇಕಿದೆ.ತುಟ್ಟತುದಿಯ ತಂತ್ರಜ್ಞಾನಗಳಾದ ದೂರ ಸಂವೇದಿ, ಫೊಟೋಗ್ರಾಮೆಟ್ರಿ, ಭೌಗೋಳಿಕ ಮಾಹಿತಿ ವ್ಯವಸ್ಥೆ ಮತ್ತು ಜಾಗತಿಕ ಸ್ಥಾನೀಕರಣ ವ್ಯವಸ್ಥೆಗಳ ಪ್ರಾಮುಖ್ಯತೆಯು ವಿವಿಧ ಯೋಜನಾ ಸಮಸೈಗಳನ್ನು ಬಗೆಹರಿಸಲು ಅತ್ಯಂತ ಸಹಕಾರಿಎಂಬುದನ್ನು ಅರಿತುಕೊಳ್ಳಲಾಗಿದೆ.